ಕಾಲಿಂಜರ್

ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಸ್ಥಳ. ಇಲ್ಲಿರುವ ಕೋಟೆ ಪ್ರಾಚೀನವಾದ್ದು. 10ನೆಯ ಶತಮಾನದಲ್ಲಿ ಕನೌಜಿನ ರಾಜರ ಸಾಮಂತನಾಗಿದ್ದ ಚಾಂಡೆಲ ರಾಜ ಯಶೋವರ್ಮ ಕಾಲಿಂಜರ್ ಕೂಟಿಯನ್ನು ಗೆದ್ದುಕೊಂಡು ಸ್ವತಂತ್ರನಾದ. ಚಾಂಡೆಲರು ಕಾಲಿಂಜರ್ ನಗರದಲ್ಲಿ ಸುಂದರವಾದ ದೇವಸ್ಥಾನಗಳನ್ನೂ ಸರೋವರಗಳನ್ನೂ ಕಟ್ಟಿಸಿದರು. ಘಸ್ನಿ ಮಹಮ್ಮದ್ ಕಾಲಿಂಜರ್ ಕೋಟೆಯನ್ನು ಮುತ್ತಿ, 1023 ರಲ್ಲಿ ಚಾಂಡೆಲ ರಾಜ ಗಂಡನನ್ನು ಸೋಲಿಸಿ, ಪ್ರಭಲವಾದ ಕೋಟೆಯನ್ನು  ವಶಪಡಿಸಿಕೂಂಡ. ಮಹಮ್ಮದ್ ಘೋರಿ 1203ರಲ್ಲಿ ಕೂೀಟೆಯನ್ನು ಪುನಃ ಗೆದ್ದು ಉತ್ತರ ಭಾರತದಲ್ಲಿ ತನ್ನ ಆಳ್ವಿಕೆಯನ್ನು ಸ್ಧಾಪಿಸಿದ. ತರುವಾಯ ರಜಪೂತರ ವಶವಾದ ಕೂೀಟೆಯನ್ನು ಸೂರ್ ವಂಶದ ಪೇರ್ ಷಾ 1545ರಲ್ಲಿ ಗೆದ್ದುಕೊಂಡರೂ ಕದನದಲ್ಲಿ ಆತ ಮೃತನಾದುದರಿಂದ ಮತ್ತೆ ಅದು ರಜಪೂತರ ವಶವಾಯಿತು. ಮೊಗಲ್ ಚಕ್ರವರ್ತಿ ಹುಮಾಯೂನ್ ಕಾಲಿಂಜರದ ಕೋಟೆಯನ್ನು ಮುತ್ತಿದನಾದರೂ ವಶಡಿಸಿಕೊಳ್ಳಲಾರದೆ ಕೊನೆಗೆ ರಜಪೂತರೊಡನೆ ಸಂಧಿ ಮಾಡಿಕೊಳ್ಳಬೇಕಾಯಿತು. 1569 ಅಕ್ಬರ್ ಅದನ್ನು ಗೆದ್ದುಕೂಂಡ. ಮೊಗಲ್ ಸಾಮ್ರಾಜ್ಯದ ಪತನಾನಂತರ ಅದು ಬ್ರಿಟಿಷರ ವಶಕ್ಕೆ ಹೋಗಿತ್ತು.

(ಬಿ.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ